EasyShare ಗೌಪ್ಯತೆ ನಿಯಮಗಳು
ಕೊನೆಯದಾಗಿ ನವೀಕರಿಸಿದ್ದು: ಮಾರ್ಚ್ 25, 2023
%3$s (ಇನ್ನುಮುಂದೆ "ನಾವು" ಅಥವಾ "ನಮ್ಮ" ಎಂದು ಉಲ್ಲೇಖಿಸಲಾಗುತ್ತದೆ) EasyShare ನ ("ಸೇವೆ") ಪೂರೈಕೆದಾರ ಮತ್ತು ಸೇವೆಗೆ ಸಂಬಂಧಿಸಿ ಪ್ರಕ್ರಿಯೆಗೊಳಿಸಲಾಗುವ ವೈಯಕ್ತಿಕ ಡೇಟಾಗೆ ಜವಾಬ್ದಾರವಾದ ಸಂಸ್ಥೆಯಾಗಿದೆ. ನಾವು ನಿಮ್ಮ ಗೌಪ್ಯತೆಯ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಯಾಕೆ ಮತ್ತು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ ಎನ್ನುವುದನ್ನು ನೀವು ತಿಳಿಯುವುದು ಮುಖ್ಯ ಎಂದು ಭಾವಿಸುತ್ತೇವೆ. ಆದ್ದರಿಂದ ಈ EasyShare ಗೌಪ್ಯತೆ ನಿಯಮಗಳಲ್ಲಿ ("ನಿಯಮಗಳು"), ಈ ಕೆಳಗಿನ ವಿಷಯವನ್ನು ನಾವು ವಿವರಿಸಿದ್ದೇವೆ:
1. ಸಂಗ್ರಹ ಮತ್ತು ಪ್ರಕ್ರಿಯೆಗೊಳಿಸುವಿಕೆ: ಯಾವ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಅದನ್ನು ನಾವು ಹೇಗೆ ಬಳಸುತ್ತೇವೆ;
2. ಸಂಗ್ರಹಣೆ: ನಾವು ನಿಮ್ಮ ಡೇಟಾವನ್ನು ಹೇಗೆ ಸಂಗ್ರಹಣೆ ಮಾಡುತ್ತೇವೆ;
3. ಹಂಚಿಕೊಳ್ಳುವಿಕೆ ಮತ್ತು ವರ್ಗಾವಣೆ: ನಾವು ನಿಮ್ಮ ಡೇಟಾವನ್ನು ಹೇಗೆ ಹಂಚಿಕೊಳ್ಳುವಿಕೆ ಅಥವಾ ವರ್ಗಾವಣೆ ಮಾಡುತ್ತೇವೆ;
4. ನಿಮ್ಮ ಹಕ್ಕುಗಳು: ನಿಮ್ಮ ಡೇಟಾ ಪ್ರಕ್ರಿಯೆಗೊಳಿಸುವಿಕೆಗೆ ಸಂಬಂಧಿಸಿದ ನಿಮ್ಮ ಹಕ್ಕುಗಳು ಮತ್ತು ಆಯ್ಕೆಗಳು;
5. ನಮ್ಮನ್ನು ಸಂಪರ್ಕಿಸಿ: ಯಾವುದೇ ಹೆಚ್ಚಿನ ಪ್ರಶ್ನೆಗಳೊಂದಿಗೆ ನೀವು ನಮ್ಮನ್ನು ಹೇಗೆ ಸಂಪರ್ಕಿಸಬಹುದು.
ದಯವಿಟ್ಟು ಈ ನಿಯಮಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನೀವು ಸಮ್ಮತಿ ನೀಡಿ ಸೇವೆಯನ್ನು ಬಳಸಲು ಆರಂಭಿಸುವ ಮೊದಲು ನಿಮ್ಮ ವೈಯಕ್ತಿಕ ಡೇಟಾಗೆ ಸಂಬಂಧಿಸಿ ನಮ್ಮ ಕಾರ್ಯವಿಧಾನಗಳ ಕುರಿತು ನೀವು ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸೇವೆಗೆ ಸಂಬಂಧಿಸಿ ನಿಮ್ಮ ಡೇಟಾ ಪ್ರಕ್ರಿಯೆಗೊಳಿಸುವಿಕೆಗೆ ಸಮ್ಮತಿ ನೀಡಬೇಕಾದ ಬಾಧ್ಯತೆಯನ್ನು ನೀವು ಹೊಂದಿಲ್ಲ, ಆದರೆ ದಯವಿಟ್ಟು ಈ ಕೆಳಗಿನವುಗಳನ್ನು ತಿಳಿದುಕೊಳ್ಳಿ: ಒಂದು ವೇಳೆ ನೀವು ಈ ನಿಯಮಗಳನ್ನು ಒಪ್ಪಿಕೊಳ್ಳದೇ ಇದ್ದರೆ ಅಥವಾ ಒಂದು ವೇಳೆ ನೀವು ನಿಮ್ಮ ಸಮ್ಮತಿಯನ್ನು ಹಿಂಪಡೆದರೆ, ನೀವು ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ.
1. ಸಂಗ್ರಹ ಮತ್ತು ಪ್ರಕ್ರಿಯೆಗೊಳಿಸುವಿಕೆ
ಡೇಟಾ ಮತ್ತು ಉದ್ದೇಶಗಳು
• ಒನ್-ಟಚ್ ಡಿವೈಸ್ ಸ್ವಿಚ್ ಮತ್ತು ಬ್ಯಾಕಪ್ ಮರುಸ್ಥಾಪನೆ ಮೂಲ ಕಾರ್ಯವೈಶಿಷ್ಟ್ಯಗಳಿಗಾಗಿ ನಿಮ್ಮ ಸಾಧನದಲ್ಲಿ ಸಂಗ್ರಹಣೆ ಮಾಡಲಾಗಿರುವ SMS, ಸಂಪರ್ಕಗಳು, ಕ್ಯಾಲೆಂಡರ್, ಚಿತ್ರಗಳು, ವೀಡಿಯೊ, ಆಡಿಯೊ, ಸಂಗೀತ, ಅಪ್ಲಿಕೇಶನ್ಗಳು, ಸೆಟ್ಟಿಂಗ್ಗಳು, ಕರೆ ರೆಕಾರ್ಡ್ಗಳು, ಟಿಪ್ಪಣಿಗಳು, ಫೈಲ್ಗಳು ಮತ್ತು ಇತರ ಕಂಟೆಂಟ್ಗಳನ್ನು (ಸಮಗ್ರವಾಗಿ "ಕಂಟೆಂಟ್ಗಳು") EasyShare ಪ್ರಕ್ರಿಯೆಗೊಳಿಸುತ್ತದೆ. ಅಂತಹ ವೈಯಕ್ತಿಕ ಡೇಟಾವನ್ನು ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ಮಾತ್ರ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ನಾವು ಸಂಗ್ರಹಿಸುವುದಿಲ್ಲ, ಪ್ರವೇಶಿಸುವುದಿಲ್ಲ ಅಥವಾ ನಮ್ಮ ಸರ್ವರ್ಗಳಿಗೆ ಅಪ್ಲೋಡ್ ಮಾಡುವುದಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.
• ಮೊಬೈಲ್ ಫೋನ್ ಕಾರ್ಯವೈಶಿಷ್ಟ್ಯ ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ, ನೀವು ಸಾಧನದಲ್ಲಿ ಲಾಗಿನ್ ಮಾಡಿದ್ದರೆ ಖಾತೆ ಮಾಹಿತಿ ಪ್ರದರ್ಶಿಸುವ ಉದ್ದೇಶಕ್ಕಾಗಿ EasyShare ನಿಮ್ಮ ಮೊಬೈಲ್ ಫೋನ್ ಖಾತೆ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ.
• EasyShare ಬಳಕೆದಾರರ ಅನುಭವ ಸುಧಾರಣೆ ಯೋಜನೆ: ನೀವು ಸ್ವಇಚ್ಛೆಯಿಂದ EasyShare ಬಳಕೆದಾರ ಅನುಭವ ಸುಧಾರಣೆ ಯೋಜನೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಬಹುದು. ಒಂದು ವೇಳೆ ನೀವು ಸೇರಲು ಆಯ್ಕೆ ಮಾಡಿದರೆ, ನಮ್ಮ ಸೇವೆಯನ್ನು ಸುಧಾರಿಸುವ ಸಲುವಾಗಿ, ನಾವು ನಿಮ್ಮ ಸಾಧನದ ಐಡೆಂಟಿಫೈಯರ್ ಅಥವಾ ಅಪ್ಲಿಕೇಶನ್ ಐಡೆಂಟಿಫೈಯರ್, ಸಾಧನದ ಮಾಡೆಲ್, ಸಾಧನದ ಬ್ರ್ಯಾಂಡ್, Android ಸಿಸ್ಟಂ ಆವೃತ್ತಿ, ಅಪ್ಲಿಕೇಶನ್ ಆವೃತ್ತಿ, ಅಪ್ಲಿಕೇಶನ್ನಲ್ಲಿ ಬಳಕೆಯ ನಡವಳಿಕೆ (ಉದಾ. ಬ್ರೌಸಿಂಗ್, ಕ್ಲಿಕ್ಕಿಂಗ್ ಇತ್ಯಾದಿ), ದೇಶದ ಕೋಡ್ ಮತ್ತು ಅಪ್ಲಿಕೇಶನ್ ಕಾರ್ಯವೈಶಿಷ್ಟ್ಯ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವಾಗ ದೋಷದ ಕೋಡ್ ಇತ್ಯಾದಿಗಳನ್ನು ಸಂಗ್ರಹಿಸುತ್ತೇವೆ. ಅಂತಹ ವಿಶ್ಲೇಷಣಾತ್ಮಕ ಸುಧಾರಣೆಗಳನ್ನು ಯಾವುದೇ ವೈಯಕ್ತಿಕ ಗುರುತು ಅಥವಾ ಗುಣಲಕ್ಷಣಗಳನ್ನು ಗುರುತಿಸದೆ ಡೇಟಾ ಸಂಗ್ರಹ ರೂಪದಲ್ಲಿ ನಡೆಸಲಾಗುತ್ತದೆ. ನೀವು EasyShare ಅಪ್ಲಿಕೇಶನ್ನ ಒಳಗಡೆ ಸೆಟ್ಟಿಂಗ್ > EasyShare ಬಳಕೆದಾರ ಅನುಭವ ಸುಧಾರಣೆ ಯೋಜನೆ ಎಂಬಲ್ಲಿಗೆ ಹೋಗುವ ಮೂಲಕ ಯಾವುದೇ ಸಮಯದಲ್ಲಿ ನೀವು ಬಟನ್ ಆಫ್ ಮಾಡಲು ಆಯ್ಕೆ ಮಾಡಬಹುದು. ಒಂದು ವೇಳೆ ನೀವು ಈ ಬಟನ್ ಆಫ್ ಮಾಡಿದರೆ, ನೀವು ಮರು-ಸಮ್ಮತಿಸುವವರೆಗೆ ಸೇವೆಯಲ್ಲಿ ಅಂತಹ ಪ್ರಕ್ರಿಯೆಗೊಳಿಸುವಿಕೆಯನ್ನು ನಾವು ನಿಲ್ಲಿಸುತ್ತೇವೆ. ನೈಜ ಲಭ್ಯತೆಗೆ ಒಳಪಟ್ಟು, ಸಾಧನದ ಮಾಡೆಲ್, ಸಿಸ್ಟಂ ಆವೃತ್ತಿ ಅಥವಾ ಪ್ರಾದೇಶಿಕ ನಿರ್ಬಂಧಗಳಿಂದಾಗಿ ಈ ಕಾರ್ಯವೈಶಿಷ್ಟ್ಯವು ಕೇವಲ ಕೆಲವು ನಿರ್ದಿಷ್ಟ ಸಾಧನಗಳಲ್ಲಿ ಮಾತ್ರ ಲಭ್ಯವಿರಬಹುದು ಎನ್ನುವುದನ್ನು ದಯವಿಟ್ಟು ಗಮನಿಸಿ. ನೀವು ಈ ಕಾರ್ಯವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದರೆ ಅಥವಾ ಬಳಸಿದರೆ ಮಾತ್ರ ನಾವು ಈ ಕಾರ್ಯವೈಶಿಷ್ಟ್ಯದಡಿ ಡೇಟಾ ಪ್ರಕ್ರಿಯೆಗೊಳಿಸುತ್ತೇವೆ.
ಈ ನಿಯಮಗಳಿಗೆ ನಿಮ್ಮ ಒಪ್ಪಿಗೆ ದೊರೆತ ನಂತರ ಮೇಲಿನ ಉದ್ದೇಶಗಳಿಗಾಗಿ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಮತ್ತು ಅನ್ವಯಿಸುವ ಕಾನೂನುಗಳಿಂದ ಅನುಮತಿಸಿದಾಗ, ನಮ್ಮ ಗೌಪ್ಯತೆ ನೀತಿಯ ವಿಭಾಗ 2 ರಲ್ಲಿ ಹೇಳಿರುವಂತೆ ಕೆಲವು ಸಂದರ್ಭಗಳಲ್ಲಿ ಇತರ ಕಾನೂನು ಆಧಾರಗಳು ಅನ್ವಯಿಸಬಹುದು. ಒಂದು ವೇಳೆ ನೀವು ಸೇವೆಯ ಎಲ್ಲ ಕಾರ್ಯವೈಶಿಷ್ಟ್ಯಗಳನ್ನು ಬಳಸದಿರಲು ಬಯಸಿದರೆ, ದಯವಿಟ್ಟು ನಿಯಮಗಳ ವಿಭಾಗ 4 ರಲ್ಲಿ ವಿವರಿಸಿರುವ ವಿಧಾನಗಳ ಮೂಲಕ ನಿಮ್ಮ ಸಮ್ಮತಿಯನ್ನು ಹಿಂಪಡೆಯಿರಿ.
ಭದ್ರತೆ:
ನಿಮ್ಮ ವೈಯಕ್ತಿಕ ಡೇಟಾವನ್ನು ಸಂರಕ್ಷಿಸುವ ಕುರಿತಂತೆ ನಾವು ಕಾಳಜಿ ವಹಿಸುತ್ತೇವೆ. ಎನ್ಕ್ರಿಪ್ಶನ್ ಮತ್ತು ಅನಾಮಧೇಯಗೊಳಿಸುವಿಕೆ ತಂತ್ರಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ನಾವು ಕಾರ್ಯಗತಗೊಳಿಸಿದ್ದೇವೆ, ಇವುಗಳನ್ನು ನಿಮ್ಮ ವೈಯಕ್ತಿಕ ಡೇಟಾವನ್ನು ಅನಧಿಕೃತ ಬಳಕೆ, ಹಾನಿ, ಅಥವಾ ನಷ್ಟವಾಗುವಿಕೆಯಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ವೈಯಕ್ತಿಕ ಡೇಟಾ ರಕ್ಷಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ನಿಮ್ಮ ವೈಯಕ್ತಿಕ ಡೇಟಾ ಯಾವುದೇ ಅನಧಿಕೃತ ಬಳಕೆ, ಹಾನಿ, ಅಥವಾ ನಷ್ಟಕ್ಕೆ ಒಳಗಾಗಿದೆ ಎಂದು ನಿಮಗೆ ಸಂದೇಹ ಇದ್ದಲ್ಲಿ, ದಯವಿಟ್ಟು ಕೆಳಗೆ ನೀಡಿರುವ ಸಂಪರ್ಕ ವಿವರಗಳನ್ನು ಬಳಸಿಕೊಂಡು ತಕ್ಷಣವೇ ನಮಗೆ ತಿಳಿಸಿ.
2. ಸಂಗ್ರಹಣೆ
ಅವಧಿ:
ಮೊಬೈಲ್ ಫೋನ್ ಖಾತೆ ಲಾಗಿನ್ ಮತ್ತು ಬಳಕೆದಾರ ಅನುಭವ ಸುಧಾರಣೆ ಯೋಜನೆಗೆ ಸಂಬಂಧಿಸಿದ ಡೇಟಾವನ್ನು ಡೇಟಾ ಪ್ರಕ್ರಿಯೆಗೊಳಿಸುವಿಕೆಗೆ ಅಗತ್ಯವಿರುವ ಅವಧಿಯೊಳಗೆ ಮಾತ್ರ ನಮ್ಮ ಸರ್ವರ್ಗಳಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಇತರ ಡೇಟಾಗಾಗಿ, ವಿಶೇಷವಾಗಿ ವರ್ಗಾವಣೆ ಮಾಡಲು ಸೇವೆಗೆ ನೀವು ಬಳಸುವ ಕಂಟೆಂಟ್ಗಳನ್ನು, ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ಮಾತ್ರ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ನಾವು ಸಂಗ್ರಹಿಸುವುದಿಲ್ಲ, ಪ್ರವೇಶಿಸುವುದಿಲ್ಲ ಅಥವಾ ನಮ್ಮ ಸರ್ವರ್ಗಳಿಗೆ ಅಪ್ಲೋಡ್ ಮಾಡುವುದಿಲ್ಲ. ಇದೇ ವೇಳೆ, ನಾವು ಇವುಗಳನ್ನು ಇರಿಸಿಕೊಳ್ಳುತ್ತೇವೆ:
• ಡೇಟಾ ವಿಷಯದ ಹಕ್ಕುಗಳ ಚಲಾವಣೆಗೆ ಸಂಬಂಧಿಸಿದ ವೈಯಕ್ತಿಕ ಡೇಟಾ, ಸಮ್ಮತಿಗಳು ಮತ್ತು ಗ್ರಾಹಕ ಸಂವಹನಾ ದಾಖಲೆಗಳನ್ನು ನಮ್ಮೊಂದಿಗೆ ನಿಮ್ಮ ಕೊನೆಯ ಸಂವಹನದ ದಿನಾಂಕದಿಂದ ಐದು ವರ್ಷಗಳವರೆಗೆ;
• ಭದ್ರತೆ ಉದ್ದೇಶಕ್ಕಾಗಿ ಪ್ರಕ್ರಿಯೆಗೊಳಿಸಿದ ಬ್ಯಾಕಪ್ಗಳು ಮತ್ತ ಆ್ಯಪ್ ಲಾಗ್ಗಳನ್ನು ಅವುಗಳನ್ನು ರಚಿಸಿದ ದಿನಾಂಕದಿಂದ ಆರು ತಿಂಗಳುಗಳಿಗೆ ಹೆಚ್ಚಿಲ್ಲದಂತೆ.
ಉಳಿಸಿಕೊಳ್ಳುವಿಕೆ ಅವಧಿಯ ವಾಯಿದೆ ಮುಗಿದ ಬಳಿಕ, ಅನ್ವಯಿಸುವ ಕಾನೂನುಗಳು ಮತ್ತು ನಿಬಂಧನೆಗಳಿಂದ ಅಗತ್ಯಪಡಿಸದ ಹೊರತು ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಅಳಿಸುತ್ತೇವೆ ಅಥವಾ ಅನಾಮಧೇಯಗೊಳಿಸುತ್ತೇವೆ.
ಸ್ಥಳ:
ಬಳಕೆದಾರರ ದೇಶ/ಪ್ರಾಂತ್ಯಕ್ಕೆ ಸಮನಾದ ಮಟ್ಟದ ಡೇಟಾ ರಕ್ಷಣೆ ಒದಗಿಸಲು ಮತ್ತು ಬಳಕೆದಾರರ ಮನವಿಗಳಿಗೆ ಇನ್ನಷ್ಟು ದಕ್ಷವಾಗಿ ಪ್ರತಿಕ್ರಿಯಿಸಲು, ವಿವಿಧ ದೇಶಗಳು/ಪ್ರಾಂತ್ಯಗಳಲ್ಲಿನ ಬಳಕೆದಾರರಿಗೆ ಡೇಟಾ ಸಂಗ್ರಹಣೆ ಮಾಡುವ ಸ್ಥಳವು ಬದಲಾಗುತ್ತದೆ. ನಿಮ್ಮ ವೈಯಕ್ತಿಕ ಡೇಟಾವನ್ನು ಎಲ್ಲಿ ಸಂಗ್ರಹಣೆ ಮಾಡಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮ ಗೌಪ್ಯತೆ ನೀತಿಯಲ್ಲಿನ ಸಂಗ್ರಹಣೆ ಮತ್ತು ಅಂತಾರಾಷ್ಟ್ರೀಯ ವರ್ಗಾವಣೆ ವಿಭಾಗವನ್ನು ಪರಿಶೀಲಿಸಿ.
3. ಹಂಚಿಕೊಳ್ಳುವಿಕೆ ಮತ್ತು ವರ್ಗಾವಣೆ
ಸರ್ವರ್ಗೆ ಡೇಟಾ ಅಪ್ಲೋಡ್ ಮಾಡುವುದಕ್ಕೆ ಸಂಬಂಧಿಸಿ, ನಾವು ನಿಮ್ಮ ಡೇಟಾವನ್ನು ಸ್ವತಃ ಅಥವಾ ನಮ್ಮ ಸಂಬಂಧಿತ ಕಂಪನಿಗಳು ಅಥವಾ ನಮ್ಮ ಪರವಾಗಿ ಕೆಲಸ ಮಾಡುವ ಸೇವಾ ಪೂರೈಕೆದಾರನ(ರ)ನ್ನು ಬಳಸಿಕೊಳ್ಳುವ ಮೂಲಕ ಪ್ರಕ್ರಿಯೆಗೊಳಿಸುತ್ತೇವೆ. ಇದರ ಜೊತೆಗೆ, ಅನ್ವಯಿಸುವ ಕಾನೂನುಗಳ ಅನುಸಾರ ಒಂದು ಕಾನೂನು ಪ್ರಕ್ರಿಯೆಗೆ ಪ್ರತಿಕ್ರಿಯೆಗಾಗಿ ಅಥವಾ ಸ್ಪರ್ಧಾತ್ಮಕ ಪ್ರಾಧಿಕಾರದ ವಿನಂತಿಯ ಮೇರೆಗೆ ಅಗತ್ಯವಿರುವಾಗ ಮಾತ್ರ ನಾವು ನಿಮ್ಮ ಡೇಟಾವನ್ನು ಹಂಚಿಕೊಳ್ಳುತ್ತೇವೆ.
ನಾವು ಅಂತಾರಾಷ್ಟ್ರೀಯವಾಗಿ ಕಾರ್ಯಾಚರಣೆ ಮಾಡುವುದರಿಂದ ಮತ್ತು ನಮ್ಮ ಉತ್ಪನ್ನವನ್ನು ವಿಶ್ವಾದ್ಯಂತ ನೀವು ಬಳಸಲು ಸಾಧ್ಯವಾಗುವಂತೆ ಮಾಡುವುದಕ್ಕಾಗಿ, ನಿಮ್ಮ ವೈಯಕ್ತಿಕ ಡೇಟಾವನ್ನು ಇತರ ದೇಶಗಳು/ಪ್ರದೇಶಗಳಲ್ಲಿರುವ ನಮ್ಮ ಘಟಕಗಳಿಗೆ ವರ್ಗಾವಣೆ ಮಾಡಬಹುದು ಅಥವಾ ಘಟಕಗಳು ದೂರದಿಂದಲೇ ಆ್ಯಕ್ಸೆಸ್ ಮಾಡಬಹುದು. ಡೇಟಾ ಎಲ್ಲೇ ಇರಲಿ, ಅದು ಸುರಕ್ಷಿತವಾಗಿದೆ ಎನ್ನುವುದನ್ನು ಖಚಿತಪಡಿಸಲು ಸಹಾಯ ಮಾಡುವುದಕ್ಕಾಗಿ ದೇಶಗಳ ನಡುವೆ ವೈಯಕ್ತಿಕ ಡೇಟಾದ ವರ್ಗಾವಣೆಯ ಕಾನೂನುಗಳನ್ನು ನಾವು ಅನುಸರಣೆ ಮಾಡುತ್ತೇವೆ.
4. ನಿಮ್ಮ ಹಕ್ಕುಗಳು
ನಾವು ಹೊಂದಿರುವ ನಿಮ್ಮ ಕುರಿತಾದ ಡೇಟಾಗೆ ಸಂಬಂಧಿಸಿ ನೀವು ಹಲವಾರು ಹಕ್ಕುಗಳನ್ನು ಹೊಂದಿದ್ದೀರಿ.
ಸಮ್ಮತಿ ಹಿಂಪಡೆಯುವಿಕೆ:
ಸೇವೆಯ ಪ್ರೊಫೈಲ್ನಲ್ಲಿ ಗೌಪ್ಯತೆ > ಗೌಪ್ಯತೆ ನಿಯಮಗಳು ಇದರಡಿಯಲ್ಲಿ ಕಂಡುಬರುವ ಸಮ್ಮತಿ ಹಿಂಪಡೆಯಿರಿ ಬಟನ್ ಟ್ಯಾಪ್ ಮಾಡುವ ಮೂಲಕ, ನಾವು ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವುದಕ್ಕೆ ನೀವು ಯಾವುದೇ ಸಮಯದಲ್ಲಿ ನಿಮ್ಮ ಸಮ್ಮತಿಯನ್ನು ಹಿಂಪಡೆಯಬಹುದು. ಒಂದು ವೇಳೆ ನೀವು ನಿಮ್ಮ ಸಮ್ಮತಿಯನ್ನು ಹಿಂಪಡೆದರೆ, ನೀವು ಈ ನಿಯಮಗಳಿಗೆ ಮತ್ತೊಮ್ಮೆ ಒಪ್ಪಿಗೆ ಸೂಚಿಸುವವರೆಗೂ ನಿಮ್ಮ ಡೇಟಾ ಪ್ರಕ್ರಿಯೆಗೊಳಿಸುವುದನ್ನು ನಾವು ನಿಲ್ಲಿಸುತ್ತೇವೆ.
ಇತರ ಹಕ್ಕುಗಳು:
ನಿಮ್ಮ ಹಕ್ಕುಗಳನ್ನು (ಉದಾಹರಣೆಗೆ ಅನ್ವಯವಾಗುವ ಡೇಟಾ ರಕ್ಷಣೆ ಕಾನೂನುಗಳನ್ನು ಆಧರಿಸಿ, ತಿದ್ದುಪಡಿ, ಅಳಿಸುವಿಕೆ, ಪ್ರಕ್ರಿಯೆಗೊಳಿಸುವಿಕೆಯ ನಿರ್ಬಂಧ, ಡೇಟಾ ಪೋರ್ಟೆಬಿಲಿಟಿಗೆ ಆಕ್ಷೇಪ) ಚಲಾಯಿಸುವುದಕ್ಕಾಗಿ, ದಯವಿಟ್ಟು ಕೆಳಗೆ ವಿವರಿಸಿರುವ ಸಂಪರ್ಕ ವಿವರಗಳನ್ನು ಬಳಸಿ.
ದೂರು:
ಮೇಲ್ವಿಚಾರಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಹಕ್ಕನ್ನು ನೀವು ಹೊಂದಿದ್ದೀರಿ.
5. ನಮ್ಮನ್ನು ಸಂಪರ್ಕಿಸಿ
ಒಂದು ವೇಳೆ ಈ ನಿಯಮಗಳು ಅಥವಾ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸುವುದರ ಕುರಿತು ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ಒಂದು ವೇಳೆ ನೀವು ಒಂದು ಸಮಸ್ಯೆಯನ್ನು ವರದಿ ಮಾಡಬೇಕಿದ್ದಲ್ಲಿ ಅಥವಾ ನಮ್ಮ ಡೇಟಾ ರಕ್ಷಣೆ ಅಧಿಕಾರಿಯನ್ನು ಸಂಪರ್ಕಿಸಬೇಕಿದ್ದಲ್ಲಿ, ಅಥವಾ ಒಂದು ವೇಳೆ ಡೇಟಾ ರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳ ಅಡಿಯಲ್ಲಿ ನಿಮ್ಮ ಒಂದು ಹಕ್ಕನ್ನು ಚಲಾಯಿಸಲು ಬಯಸಿದಲ್ಲಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಲು ಇಲ್ಲಿ ಟ್ಯಾಪ್ ಮಾಡಿ. ಯಾವುದೇ ಅನಗತ್ಯ ವಿಳಂಬ ಮಾಡದೆ, ಮತ್ತು ಯಾವುದೇ ಈವೆಂಟ್ನಲ್ಲಿ ಅನ್ವಯವಾಗುವ ಡೇಟಾ ರಕ್ಷಣೆ ಕಾನೂನುಗಳಲ್ಲಿ ನೀಡಲಾಗಿರುವ ಯಾವುದೇ ಸಮಯ ಮಿತಿಯೊಳಗೆ ನಿಮ್ಮ ಮನವಿಯನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತೇವೆ.
ಈ ನಿಯಮಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬಹುದು. ಯಾವುದೇ ಗಮನಾರ್ಹ ಬದಲಾವಣೆಗಳಿದ್ದಲ್ಲಿ ಸೂಕ್ತ ವಿಧಾನದ ಮೂಲಕ ನಾವು ನಿಮಗೆ ಸೂಚನೆ ನೀಡುತ್ತೇವೆ. ಈ ನಿಯಮಗಳಲ್ಲಿ ತಿಳಿಸಲಾಗಿರುವ ಎಲ್ಲಾ ಕಾರ್ಯಾಭ್ಯಾಸಗಳನ್ನು ನಮ್ಮ ಗೌಪ್ಯತೆ ನೀತಿಗೆ ಅನುಸಾರವಾಗಿ ನಿರ್ವಹಿಸಲಾಗುತ್ತದೆ, ಇದರಿಂದ ನೀವು ನಮ್ಮ ಕಾರ್ಯಾಭ್ಯಾಸಗಳ ಕುರಿತು ಇನ್ನಷ್ಟು ವಿವರಗಳನ್ನು ಕೂಡ ಪಡೆದುಕೊಳ್ಳಬಹುದು.